ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Forest News: ಕರುನಾಡ ಆನೆಗಳಿಗೆ ಹೊರ ನಾಡಿನಲ್ಲಿ ಭಾರೀ ಬೇಡಿಕೆ, ಆಂಧ್ರಪ್ರದೇಶಕ್ಕೆ ಬೇಕಿದೆ 9 ಆನೆ

Forest News: ಕರುನಾಡ ಆನೆಗಳಿಗೆ ಹೊರ ನಾಡಿನಲ್ಲಿ ಭಾರೀ ಬೇಡಿಕೆ, ಆಂಧ್ರಪ್ರದೇಶಕ್ಕೆ ಬೇಕಿದೆ 9 ಆನೆ

  • Elephants of Karnataka  ಕರ್ನಾಟಕ ಆನೆಗಳಿಗೆ ಬಲು ಜನಪ್ರಿಯ. ಇಲ್ಲಿ ಕಾಡಾನೆಗಳ ಸಂಖ್ಯೆಯೂ ಹೆಚ್ಚಿವೆ. ಅದೇ ರೀತಿ ಶಿಬಿರದಲ್ಲಿರುವ ಸಾಕಾನೆಗಳೂ( Elephant camp) ಕೂಡ. ಇವುಗಳಿಗೂ ಎಲ್ಲಿಲ್ಲದ ಬೇಡಿಕೆ. ಕರ್ನಾಟಕದ ಆನೆಗಳಿಗೆ ಏಕೆ ಅಷ್ಟು ಬೇಡಿಕೆ ಇಲ್ಲಿದೆ ಮಾಹಿತಿ.

ಕರ್ನಾಟಕದಲ್ಲಿ ಆರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹತ್ತು ಸಾಕಾನೆ ಶಿಬಿರಗಳಿದ್ದು, ಅರಣ್ಯ ಇಲಾಖೆ ನಿರ್ವಹಣೆ ಮಾಡುತ್ತಿದೆ. ಇಲ್ಲಿ ನೂರಕ್ಕೂ ಅಧಿಕ ಆನೆಗಳಿದ್ದು, ಅವುಗಳಿಗೆ ಹೊರ ರಾಜ್ಯಗಳಿಂದ ಎಲ್ಲಿಲ್ಲದ ಬೇಡಿಕೆ.
icon

(1 / 6)

ಕರ್ನಾಟಕದಲ್ಲಿಯೇ ಆರು ಸಾವಿರಕ್ಕೂ ಅಧಿಕ ಆನೆಗಳಿದ್ದು, ಉಪಟಳವೂ ಹೆಚ್ಚಿದೆ, ಹಾಸನ, ಕೊಡಗು, ಮೈಸೂರು ಭಾಗದಲ್ಲಿ ಆನೆಗಳನ್ನು ಸೆರೆ ಹಿಡಿದು ಪಳಗಿಸಲಾಗುತ್ತಿದೆ. 
icon

(2 / 6)

ಕರ್ನಾಟಕದ ಆನೆಗಳನ್ನು ಪಳಗಿಸುವ ರೀತಿ ನಿಜಕ್ಕೂ ವಿಶೇಷ. ಮುಂಚೆ ಖೆಡ್ಡಾ ಕಾರ್ಯಾಚರಣೆ ಮೂಲಕ ಪಳಗಿಸಲಾಗುತ್ತಿತ್ತು. ಅದು ನಿಷೇಧವಾದ ನಂತರ ಈಗ ಕ್ರಾಲ್‌ ನಲ್ಲಿ ಹಾಕಿ ಪಳಗಿಸಲಾಗುತ್ತದೆ, ತರಬೇತಿ ರೀತಿಯೂ ಬೇರೆ ರಾಜ್ಯಗಳ ಬೇಡಿಕೆಗೆ ಕಾರಣ.
icon

(3 / 6)

ಕರುನಾಡ ಆನೆಗಳನ್ನು ತೆಗೆದುಕೊಂಡು ಹೋದರೆ ಅರಣ್ಯ ನಿರ್ವಹಣೆ ಜತೆಗೆ ವನ್ಯ ಜೀವಿಗಳ ಕಾರ್ಯಾಚರಣೆಗೂ ಬಳಸಬಹುದು. ಆನೆ ಸೆರೆಗೆ ನಮ್ಮ ಆನೆಗಳು ಫಿಟ್‌ ಎನ್ನುವ ನಂಬಿಕೆ ಹೊರ ರಾಜ್ಯದ ಅರಣ್ಯ ಇಲಾಖೆಗಳಲ್ಲಿದೆ. 
icon

(4 / 6)

ಈಗಾಗಲೇ ಎರಡು ದಶಕದಿಂದಲೂ ಹೊರ ರಾಜ್ಯಗಳಿಗೆ ಕೊಡಲಾಗುತ್ತಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕರ್ನಾಟಕದ ಸಾಕಾನೆಗಳೆ ಹೆಚ್ಚಿವೆ. 
icon

(5 / 6)

ಈಗಲೂ ಆಂಧ್ರಪ್ರದೇಶ ಅರಣ್ಯ ಇಲಾಖೆ ಒಂಬತ್ತು ಆನೆಗಳಿಗೆ ಬೇಡಿಕೆಯನ್ನು ಇಟ್ಟಿದೆ. ಕರ್ನಾಟಕ ಇಲಾಖೆಯು ಸಚಿವರ ಒಪ್ಪಿಗೆಯೊಂದಿಗೆ ಆನೆ ನೀಡಲು ಮುಂದಾಗಿದೆ. ಇದಕ್ಕಾಗಿ ಒಂಬತ್ತು ಆನೆ ಆಯ್ಕೆ ಪ್ರಕ್ರಿಯೆಯೂ ಆರಂಭವಾಗಲಿದೆ. 
icon

(6 / 6)

ಇತರ ಗ್ಯಾಲರಿಗಳು