ಕನ್ನಡ ಸುದ್ದಿ  /  ಜೀವನಶೈಲಿ  /  Sleeping Problem: ಅರಿಯದ ಆತಂಕ ನಿದ್ದೆಯನ್ನು ಕಸಿಯುತ್ತಿದ್ಯಾ? ನಿದ್ರಾಹೀನತೆ ದೂರಾಗಲು ಹೀಗಿರಲಿ ನಿಮ್ಮ ದಿನಚರಿ

Sleeping Problem: ಅರಿಯದ ಆತಂಕ ನಿದ್ದೆಯನ್ನು ಕಸಿಯುತ್ತಿದ್ಯಾ? ನಿದ್ರಾಹೀನತೆ ದೂರಾಗಲು ಹೀಗಿರಲಿ ನಿಮ್ಮ ದಿನಚರಿ

ಆತಂಕದ ಭಾವನೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಅನೇಕರಿಗೆ ಈ ಸಮಸ್ಯೆಯು ಭವಿಷ್ಯದಲ್ಲಿ ನಿದ್ರಾಹೀನತೆ ತೊಂದರೆಯನ್ನು ತಂದೊಡ್ಡಬಹುದು. ಅರಿಯದ ಆತಂಕದಿಂದ ನಿದ್ರೆ ಬಾರದೇ ಒದ್ದಾಡುವವರ ಪಟ್ಟಿಯಲ್ಲಿ ನೀವೂ ಇದ್ರೆ ಈ ಸಮಸ್ಯೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಇಲ್ಲಿದೆ ಮಾರ್ಗ.

ಅರಿಯದ ಆತಂಕವು ನಿದ್ದೆಯನ್ನು ಕಸಿಯುತ್ತಿದ್ಯಾ? ನಿದ್ರಾಹೀನತೆ ದೂರಾಗಲು ಹೀಗಿರಲಿ ನಿಮ್ಮ ದಿನಚರಿ
ಅರಿಯದ ಆತಂಕವು ನಿದ್ದೆಯನ್ನು ಕಸಿಯುತ್ತಿದ್ಯಾ? ನಿದ್ರಾಹೀನತೆ ದೂರಾಗಲು ಹೀಗಿರಲಿ ನಿಮ್ಮ ದಿನಚರಿ

ಮನುಷ್ಯನಿಗೆ ನಿದ್ರೆ ಬಲು ಮುಖ್ಯ. ಸರಿಯಾಗಿ ನಿದ್ರೆ ಬಂದಿಲ್ಲ ಅಂದ್ರೆ ಅದೇನನ್ನೊ ಕಳೆದುಕೊಂಡ ಭಾವ. ಈ ಸಂದರ್ಭ ಎಲ್ಲದಕ್ಕೂ ಸಿಟ್ಟು ಸಿಟ್ಟು ಮಾಡಿಕೊಳ್ಳುವುದು ಸಹಜ. ಇದರ ಜೊತೆ ನಿದ್ರಾಹೀನತೆ ಸಮಸ್ಯೆ ಸಾಕಷ್ಟು ಆರೋಗ್ಯದ ತೊಂದರೆಗಳಿಗೂ ಕಾರಣವಾಗಬಹುದು. ಅದರಲ್ಲೂ ಆತಂಕದ ಭಾವ ಹೊಂದಿರುವ ಜನರು ಹೆಚ್ಚು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ನಿದ್ರಾಹೀನತೆಗೆ ಆತಂಕ ಪ್ರಮುಖ ಕಾರಣಗಳಲ್ಲೊಂದು. ಈ ಸಮಸ್ಯೆ ನಿಮ್ಮ ನೆಮ್ಮದಿಯ ನಿದ್ರೆಗೆ ಭಂಗವನ್ನುಂಟು ಮಾಡುತ್ತದೆ. ಇದರ ಜೊತೆ ವಿಪರೀತ ಚಿಂತೆ, ಕಿರಿಕಿರಿ, ಪ್ಯಾನಿಕ್ ಅಟ್ಯಾಕ್‌ಗಳಿಗೂ ಕಾರಣವಾಗುತ್ತೆ. ಒಬ್ಬ ವ್ಯಕ್ತಿಗೆ ಒತ್ತಡಗಳನ್ನು ಮ್ಯಾನೇಜ್ ಮಾಡೋದಕ್ಕೆ ಜೊತೆಗೆ ನಿತ್ಯ ನೆಮ್ಮದಿಯಿಂದ ಇರೋದಕ್ಕೆ ಸಾಕಷ್ಟು ನಿದ್ರೆಯ ಅವಶ್ಯಕತೆಯಿದೆ. ಆತಂಕದಿಂದ ಬಳಲುತ್ತಿರುವ ವ್ಯಕ್ತಿಯು ನಿದ್ರಾಹೀನತೆಗೆ ಒಳಗಾದಾಗ, ಅವನ ಅಥವಾ ಅವಳ ಭಾವನೆಗಳಲ್ಲಿ ಏರುಪೇರು ಉಂಟಾಗಬಹುದು. ಈ ಸಂದರ್ಭ ಭಾವನೆಗಳನ್ನು ನಿಯಂತ್ರಣ ಮಾಡುವುದೇ ಕಷ್ಟಕರವಾಗಬಹುದು. ಇದಕ್ಕಾಗಿ ಸಾಕಷ್ಟು ನಿದ್ರೆ ಮಾಡಿದ್ರೆ ನಾವು ನಮ್ಮ ಭಾವನೆಗಳನ್ನು ಸುಲಭವಾಗಿ ನಿಯಂತ್ರಣ ಮಾಡಬಹುದು. ಇದರಿಂದ ಆತಂಕದ ಸಮಸ್ಯೆಯನ್ನು ಸಹ ಸುಲಭವಾಗಿ ನಿಯಂತ್ರಣ ಮಾಡಬಹುದು. ಹಾಗಾದ್ರೆ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಸೂಕ್ತ ಸಲಹೆಗಳು ಇಲ್ಲಿವೆ.

ಮಲಗುವ ಸಂದರ್ಭ ಆತಂಕವನ್ನು ನಿವಾರಿಸುವುದು ಹೇಗೆ..?

1. ಸಮಾಧಾನದಿಂದಿರುವುದನ್ನು ಅಭ್ಯಾಸ ಮಾಡಿ: ಸಮಾಧಾನದಿಂದ ಇರುವುದನ್ನು ಅಭ್ಯಾಸ ಮಾಡಿಕೊಂಡರೆ ನೀವು ವರ್ತಮಾನದಲ್ಲಿ ಬದುಕೋದಕ್ಕೆ ಸಹಾಯವಾಗುತ್ತೆ. ಇದರಿಂದ ನಿರ್ದಿಷ್ಟ ಗುರಿಯನ್ನು ಸಾಧಿಸೋದಕ್ಕಾಗುತ್ತೆ, ವಿಶ್ರಾಂತಿಯು ಸಿಗುತ್ತೆ. ಇದರ ಜೊತೆ ಮಲಗುವ ಮುನ್ನ ಕೆಲ ಹೊತ್ತು ಧ್ಯಾನ ಮಾಡಿ ಮತ್ತು ಉಸಿರಾಟದ ಮೇಲೆ ಕೇಂದ್ರಿಕರಣಗೊಳಿಸಿ.

ಟ್ರೆಂಡಿಂಗ್​ ಸುದ್ದಿ

2. ಮಲಗುವ ಮುನ್ನ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ: ಮಲಗುವ ಮುನ್ನ ಕೆಲ ಅಭ್ಯಾಸಗಳನ್ನು ರೂಢಿ ಮಾಡಿಕೊಂಡರೆ ಇದು ನಿದ್ರೆಯ ಸಮಯ ಎಂದು ನಿಮ್ಮ ದೇಹ ಅಂದಾಜು ಮಾಡುತ್ತೆ. ಮಲಗುವ ಮೊದಲು ಪುಸ್ತಕ ಓದೋದು, ಬೆಚ್ಚಗಿನ ಸ್ನಾನ ಮಾಡೋದು, ಇಂಪಾದ ಸಂಗೀತವನ್ನು ಕೇಳುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ.

3. ಉತ್ತಮ ಹಾಸಿಗೆಯನ್ನು ಖರೀದಿಸಿ: ಒಳ್ಳೆಯ ಗುಣಮಟ್ಟದ ಹಾಸಿಗೆಯನ್ನು ಬಳಸೋದ್ರಿಂದ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು. ನಿಮ್ಮ ದೇಹಕ್ಕೆ ಅನುಗುಣವಾಗಿ ತಯಾರು ಮಾಡಿದ ಉತ್ತಮ ಗುಣಮಟ್ಟದ ಹಾಸಿಗೆಯನ್ನು ಬಳಸಿ. ಇದು ಉತ್ತಮ ನಿದ್ರೆ ಬರುವಂತೆ ಮಾಡಲು ಬಹಳಷ್ಟು ಸಹಾಯಕವಾಗುತ್ತೆ. ಇದರ ಜೊತೆಗೆ ದೇಹದಲ್ಲಿ ಉತ್ತಮ ರಕ್ತ ಪರಿಚಲನೆಯಾಗಿ ಹಾಯಾಗಿ ನಿದ್ರೆ ಬರುವಂತಾಗುತ್ತದೆ.

4. ಬೆಡ್‌‌ನಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ: ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಬೆಡ್‌ನ್ನು ಸ್ವಚ್ಛ ಮಾಡಿ. ನೀವು ಮಲಗುವ ಜಾಗವನ್ನು ಸ್ವಚ್ಛವಾಗಿರಿಸಿಕೊಂಡರೆ ನಿದ್ರೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಬೆಡ್‌ ಮೇಲೆ ಯಾವುದೇ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಬೇಡಿ.

5. ಮಲಗುವ ಮುನ್ನ ಫೋನ್ ಬಳಕೆ ಬೇಡ: ಹೌದು ಮಲಗುವುದಕ್ಕಿಂತ ಒಂದರಿಂದ ಎರಡು ಗಂಟೆಗಳ ಮೊದಲು ಮೊಬೈಲ್ ಬಳಕೆ ಮಾಡಬೇಡಿ. ಈ ರೀತಿ ಮೊಬೈಲ್ ಸ್ಕ್ರೀನ್ ನೋಡುವುದನ್ನು ನಿಲ್ಲಿಸುವುದರಿಂದ ಉತ್ತಮ ನಿದ್ದೆಗೆ ಜಾರೋದಕ್ಕೆ ಅನುಕೂಲವಾಗುತ್ತೆ.

ಆತಂಕದ ಸಮಸ್ಯೆಯನ್ನು ನಿವಾರಿಸಿಕೊಂಡು, ನಿದ್ರಾಹೀನತೆಯ ಸಮಸ್ಯೆಯಿಂದ ಹೊರಬರಲು ಬೆಡ್‌ ಅನ್ನು ಸ್ವಚ್ಛವಾಗಿಡುವ ಮೂಲಕ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು ಎಂದು ಸಂಕ್ಷಿಪ್ತವಾಗಿ ಹೇಳಬಹುದು. ನಿಮ್ಮ ಒಟ್ಟು ಯೋಗಕ್ಷೇಮಕ್ಕಾಗಿ ಉತ್ತಮ ನಿದ್ರೆಯನ್ನು ಪಡೆಯಲು ಜೊತೆಗೆ ದಿನನಿತ್ಯ ಚುರುಕಾಗಿ ಇರೋದಕ್ಕೆ ನೀವು ನಿಮ್ಮ ದೇಹ ಮತ್ತು ಮನಸ್ಸನ್ನು ಪ್ರೀತಿಸುವುದು ಸಹ ಮುಖ್ಯ.