ಕನ್ನಡ ಸುದ್ದಿ  /  ಕ್ರಿಕೆಟ್  /  ವಾಂಖೆಡೆಯಲ್ಲಿ ಬಾಹುಬಲಿ-2 ಇಂಟರ್ವಲ್ ದೃಶ್ಯ ಮರುಸೃಷ್ಟಿಸಿದ ವಿರಾಟ್ ಕೊಹ್ಲಿ, ಆ ಸೀನ್ ನೋಡಿದವರೇ ಭಾಗ್ಯವಂತರು!

ವಾಂಖೆಡೆಯಲ್ಲಿ ಬಾಹುಬಲಿ-2 ಇಂಟರ್ವಲ್ ದೃಶ್ಯ ಮರುಸೃಷ್ಟಿಸಿದ ವಿರಾಟ್ ಕೊಹ್ಲಿ, ಆ ಸೀನ್ ನೋಡಿದವರೇ ಭಾಗ್ಯವಂತರು!

Baahubali 2 Interval Scene: ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಬಾಹುಬಲಿ-2 ಇಂಟರ್ವಲ್ ದೃಶ್ಯವನ್ನು ವಿರಾಟ್ ಕೊಹ್ಲಿ ಮರುಸೃಷ್ಟಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ.

ವಾಂಖೆಡೆಯಲ್ಲಿ ಬಾಹುಬಲಿ-2 ಇಂಟರ್ವಲ್ ದೃಶ್ಯ ಮರುಸೃಷ್ಟಿಸಿದ ವಿರಾಟ್ ಕೊಹ್ಲಿ, ಆ ಸೀನ್ ನೋಡಿದವರೇ ಭಾಗ್ಯವಂತರು!
ವಾಂಖೆಡೆಯಲ್ಲಿ ಬಾಹುಬಲಿ-2 ಇಂಟರ್ವಲ್ ದೃಶ್ಯ ಮರುಸೃಷ್ಟಿಸಿದ ವಿರಾಟ್ ಕೊಹ್ಲಿ, ಆ ಸೀನ್ ನೋಡಿದವರೇ ಭಾಗ್ಯವಂತರು!

ಬಾಹುಬಲಿ-2 ಚಿತ್ರವನ್ನು (Baahubali 2) ನೋಡಿರದವರು ಯಾರಿದ್ದಾರೆ ಹೇಳಿ? ಚಿತ್ರಮಂದಿರ, ಒಟಿಟಿ, ಟಿವಿಗಳಲ್ಲಿ ಐತಿಹಾಸಿಕ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ವೀಕ್ಷಿಸಿದ ಎಲ್ಲರೂ ಹೇಳುವುದು ಒಂದೇ.. ಇಂಟರ್ವೆಲ್​ ದೃಶ್ಯ ಅದ್ಭುತ! ಆ ರೋಮಾಂಚನಕಾರಿ ದೃಶ್ಯ ನೋಡುವಾಗ ರೋಮಗಳು ಎದ್ದು ನಿಲ್ಲುತ್ತವೆ ಎಂದವರೇ ಹೆಚ್ಚು. ಈ ಒಂದು ಸೀನ್​ಗಾಗಿ ಎಷ್ಟು ದುಡ್ಡು ಕೊಟ್ಟರೂ ಸಾಲದು. ಈಗ ಅಂತಹದ್ದೇ ದೃಶ್ಯವನ್ನು ರಿಕ್ರಿಯೇಟ್ ಮಾಡಿದ್ದಾರೆ ವಿರಾಟ್ ಕೊಹ್ಲಿ (Virat Kohli).

ಬಲ್ಲಾಳದೇವ (ರಾಣಾ) ಮಾಹಿಷ್ಮತಿ ಸಾಮ್ರಾಜ್ಯದ ರಾಜನಾಗಿ ಪಟ್ಟಾಭಿಷೇಕ ಪಡೆದ ವೇಳೆ ತನ್ನ ಸೈನಿಕರು ಮತ್ತು ಬೆಂಬಲಿಗರು ಮಾತ್ರ ಜೈಹೋ ಕೂಗುತ್ತಾರೆ. ಆದರೆ, ಅಮರೇಂದ್ರ ಬಾಹುಬಲಿ (ಪ್ರಭಾಸ್) ಸರ್ವಸೈನ್ಯಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದ ವೇಳೆ ಪ್ರಜೆಗಳ ಜೈಕಾರದ ಕೂಗಿಗೆ ಇಡೀ ಆಸ್ಥಾನವೇ ಅಲುಗಾಡಿತ್ತು. ಬಾಹುಬಲಿ ಸಂಪಾದಿಸಿದ ಪ್ರೀತಿ ಕಂಡು ರಾಜನೇ ಮೂಕವಿಸ್ಮಿತನಾಗುತ್ತಾನೆ! ಅಂತಹದ್ದೇ ದೃಶ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಮರು ಸೃಷ್ಟಿಯಾಯಿತು.

ಹೌದು, ಐಕಾನಿಕ್ ಕ್ರಿಕೆಟ್ ಮೈದಾನ ವಾಂಖೆಡೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿರಾಟ್ ಕೊಹ್ಲಿ ಕೂಡ ಬಾಹುಬಲಿ-2 ಚಿತ್ರದ ಇಂಟರ್ವೆಲ್ ಚಿತ್ರದ ಸನ್ನಿವೇಶ ಎದುರಿಸಿದರು. ನಿರೂಪಕ ಗೌರವ್ ಅವರು, ಟಿ20 ವಿಶ್ವಕಪ್ ಗೆಲುವಿನ ಕುರಿತು ಮಾತನಾಡಲು ಕೊಹ್ಲಿಯನ್ನು ವೇದಿಕೆ ಕರೆದರು. ವಿರಾಟ್ ವೇದಿಕೆಯತ್ತ ಬರುತ್ತಿದ್ದಂತೆ, ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಜೋರಾಗಿ ಕೂಗತೊಡಗಿದರು. ಇಡೀ ಮೈದಾನವೇ ರಿಸೌಂಡ್ ಬರುತ್ತಿತ್ತು. ಸಹ ಆಟಗಾರರು, ಬಿಸಿಸಿಐ ಅಧಿಕಾರಿಗಳು ಕೊಹ್ಲಿ ಫ್ಯಾನ್ ಫಾಲೋಯಿಂಗ್ ಕಂಡು ದಂಗಾದರು.

ಟ್ರೆಂಡಿಂಗ್​ ಸುದ್ದಿ

ವೇದಿಕೆಗೆ ಆಗಮಿಸಿದ ನಂತರ ಅಭಿಮಾನಿಗಳತ್ತ ಕೈಬೀಸಿದ ಕೊಹ್ಲಿ ಮಾತನಾಡಲು ಆರಂಭಿಸಿದರು. ಆದರೆ, ಫ್ಯಾನ್ಸ್ ಅದಕ್ಕೆ ಅವಕಾಶವೇ ಮಾಡಿಕೊಡಲಿಲ್ಲ. ಕೆಲ ಹೊತ್ತಾದ ನಂತರ ಮೊದಲಿಗೆ ಎಂದು ಮಾತು ಶುರು ಮಾಡಿದರು. ಆಗ ಅಭಿಮಾನಿಗಳ ಘೋಷಣೆ ಮತ್ತಷ್ಟು ಹೆಚ್ಚಾಯಿತು. ಕೊಹ್ಲಿ, ಕೊಹ್ಲಿ, ಕೊಹ್ಲಿ ಎಂದು ಕೂಗತೊಡಗಿದರು. ನಿಜವಾಗಲೂ ಈ ದೃಶ್ಯ ರೋಮಗಳು ಎದ್ದು ನಿಲ್ಲುವಂತೆ ಮಾಡಿತು. ವಿರಾಟ್ ಕೂಡ ಭಾವುಕಕ್ಕೆ ಒಳಗಾದರು. ಅಕ್ಷರಶಃ ಬಾಹುಬಲಿ-2 ಚಿತ್ರದ ಇಂಟರ್ವೆಲ್ ದೃಶ್ಯ ನೋಡಿದಂತೆಯೇ ಭಾಸವಾಯಿತು. ಆದರೆ, ಇಲ್ಲಿ ಯಾವುದೇ ಪಟ್ಟಾಭಿಷೇಕ ಇರಲಿಲ್ಲ.

ಫೈನಲ್​ನಲ್ಲಿ ಕೊಹ್ಲಿ ಅಬ್ಬರ, ಟಿ20ಐಗೆ ವಿದಾಯ

ಟಿ20 ವಿಶ್ವಕಪ್ ಫೈನಲ್​ನಲ್ಲಿ ಗೆದ್ದ ಭಾರತ 17 ವರ್ಷಗಳ ನಂತರ ಚುಟುಕು ವಿಶ್ವಕಪ್​ಗೆ ಮುತ್ತಿಕ್ಕಿತು. ಈ ಪಂದ್ಯದಲ್ಲಿ ಭಾರತ 34/3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಜವಾಬ್ದಾರಿ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ, ತಂಡವು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾದರು. 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 76 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿದ್ದ ಕೊಹ್ಲಿ, ಫೈನಲ್​ನಲ್ಲಿ ಅಬ್ಬರಿಸಿದರು.

ಬಾರ್ಬಡೋಸ್​ ಟು ಡೆಲ್ಲಿ, ಮುಂಬೈ ಜರ್ನಿ

ಜೂನ್ 29ರಂದು ನಡೆದ ಫೈನಲ್​ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 7 ರನ್​ಗಳಿಂದ ಮಣಿಸಿದ ಭಾರತ ಚಾಂಪಿಯನ್ ಆಯಿತು. ಈ ಗೆಲುವಿನ ನಂತರ ಟೀಮ್ ಇಂಡಿಯಾ, ಮರು ದಿನವೇ ಭಾರತಕ್ಕೆ ಮರಳಬೇಕಿತ್ತು. ಆದರೆ, ದ್ವೀಪರಾಷ್ಟ್ರಕ್ಕೆ ಚಂಡಮಾರುತ ಅಪ್ಪಳಿಸಿದ ಕಾರಣ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ಮೂರು ದಿನಗಳ ಕಾಲ ಬಾರ್ಬಡೋಸ್​ನಲ್ಲೇ ಉಳಿಯಬೇಕಾಯಿತು. ನಂತರ ಬಿಸಿಸಿಐ ವಿಶೇಷ ವಿಮಾನದ ವ್ಯವಸ್ಥೆ ಮಾಡಿ, ಆಟಗಾರರನ್ನು ಸುರಕ್ಷಿತವಾಗಿ ಕರೆತರಲಾಯಿತು.

ನವದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತ ತಂಡಕ್ಕೆ ಅದ್ಧೂರಿ ಸ್ವಾಗತ ದೊರೆಯಿತು. ಐಟಿಸಿ ಮೌರ್ಯ ಹೋಟೆಲ್​ನಲ್ಲಿ ಕೆಲವೊತ್ತು ವಿಶ್ರಾಂತಿ ಪಡೆದ ನಂತರ ಪ್ರಧಾನಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಅಲ್ಲಿಂದ ಮುಂಬೈಗೆ ವಿಮಾನದ ಮೂಲಕ ಬಂದ ಕ್ರಿಕೆಟಿಗರು ತೆರೆದ ಬಸ್​ನಲ್ಲಿ ರೋಡ್​ಶೋನಲ್ಲಿ ಪಾಲ್ಗೊಂಡರು. ಲಕ್ಷಾಂತರ ಅಭಿಮಾನಿಗಳ ಪ್ರೀತಿಗೆ ಭಾರತೀಯ ಕ್ರಿಕೆಟಿಗರು ಭಾವುಕರಾದರು. ಕೊನೆಗೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.